ಮೈಸೂರೇಕೆ ಬಯಲು ಶೌಚಮುಕ್ತವಾಗಲು ಸಾಧ್ಯವಿಲ್ಲ?

2017-18ನೆ ಆರ್ಥಿಕ ವರ್ಷದ ಮುಂಗಡ ಪತ್ರವನ್ನು ಮಂಡಿಸುವಾಗ ಮಾನ್ಯ ಜಿಲ್ಲಾಪಂಚಾಯತ್ ಅಧ್ಯಕ್ಷರು ಬರುವ ಮಾರ್ಚ್ 2018 ರೊಳಗೆ ಮೈಸೂರು ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸಲಾಗುವುದು ಎಂದು ಹೇಳಿರುವುದಾಗಿ ಪತ್ರಿಕೆಯಲ್ಲಿ ಓದಿದಾಗÀ ಅರೆಕ್ಷಣ ಮನಸ್ಸು ಇಸವಿ 2008ಕ್ಕೆ ನನಗೆ ಅರಿವಿಲ್ಲದೆಯೇ ಹೋಗಿ ಕುಳಿತಿತ್ತು. ನಾನಾಗ ರಾಂiÀiಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಬಾಂಗ್ಲಾದೇಶದಿಂದ ಆಶ್ರಯವನ್ನರಸಿ ಬಂದ ಬಂಧುಗಳಿಗಾಗಿ ನೀಡಿದ್ದ ಪುನರ್ವಸತಿ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಿಕೊಡುವ ಯೋಜನೆಯ ಅನುμÁ್ಠನ ನಡೆಸುತ್ತಿದ್ದ ಸಮಯ. ಭೌಗೋಳಿಕವಾಗಿ ಮತ್ತು ಸಾಂಸ್ಕøತಿಕವಾಗಿ ಸವಾ ಗಿದ್ದ ಪ್ರದೇಶವಾಗಿದ್ದರಿಂದ ನಮಗಿದ್ದದ್ದು ಕೇವಲ 250 ಶೌಚಾಲಯಗಳ ನಿರ್ಮಾಣದ ಗುರಿ. ಆದರೂ ನಮ್ಮ ಸ್ಥಳೀಯ ಕಾರ್ಯಕರ್ತರ ಭಗೀರಥÀ ಪ್ರಯತ್ನ ಸಮುದಾಯದ ಮನವೊಲಿಸುವಲ್ಲಿ ಫಲಕಾರಿಯಾಗಿರಲಿಲ್ಲ. ಯೋಜನೆಯ ಮುಖ್ಯಸ್ಥನಾಗಿ ನನ್ನದೊಂದು ಕೈ ನೋಡೋಣ ಎಂದು ಸಮುದಾಯ ಸಮಾಲೋಚನೆಗೆ ಇಳಿದದ್ದಾಯಿತು. ಸಮಾಲೋಚನೆಯ ಸಂಧರ್ಭದಲ್ಲಿ ಮಹಿಳೆಯರ ಗುಂಪಿನಲ್ಲಿ ಒಂದಷ್ಟು ಗರ್ಭಿಣಿಯರೂ ಇದ್ದ ಕಾರಣ ಮುಖ್ಯ ವಿಷಯಕ್ಕೆ ಹೋಗುವ ಮೊದಲು ಒಂದಷ್ಟು ಉಭಯ ಕುಶಲೋಪರಿ ನಡೆಸೋಣ ಎಂದು “ಏನಮ್ಮಾ ಹೇಗಿದ್ದೀರಿ? ಕಾಲಕಾಲಕ್ಕೆ ವೈದ್ಯರ ಸಂದರ್ಶನಕ್ಕೆ ಹೋಗುತ್ತಿದ್ದೀರೋ? ಏಕೆ ಸ್ವಲ್ಪ ಪೇಲವವಾಗಿ ಕಾಣುತ್ತೀರಲ್ಲ, ಪೌಷ್ಠಿಕ ಆಹಾರ ತೆಗೆದುಕೊಳ್ಳುವುದಿಲ್ಲವೆ?” ಎಂದು ಕೇಳಿದೆ. ಪ್ರತಿಕ್ರಿಯೆ ನಿರೀಕ್ಷಿಸಿದ್ದ ನನಗೆ ಸಿಕ್ಕಿದ್ದು ತಲೆ ಕೆಳಗೆ ಮಾಡಿದ ಆ ತಾಯಿಯಿಂದ ಒಂದು ಧೀರ್ಘಮೌನ. ಸರಿ ಚರ್ಚೆ ನಡೆಸಬೇಕಲ್ಲಾ! ಮುಂದುವರೆದು ಕೇಳಿದಾಗ ಸಿಕ್ಕ ಉತ್ತರ ನನಗೊಂದು ಹೊಸ ಪಾಠವನ್ನೆ ಕಲಿಸಿತು. ಅಭಿವೃದ್ಧಿಯ ವಿಷಯ ಕೆ¯ವೊಮ್ಮೆ ಹೇಗೆ ತರ್ಕಕ್ಕೆ ನಿಲುಕದ ಒಂದು ಸಂಕೀರ್ಣ ಆದರೂ ಅಸಂಖ್ಯ ಮಜುಲುಗಳ ಭಂಡಾರವೆಂದು. ಆಕೆ ಹೇಳಿದ ಉತ್ತರ ನೈರ್ಮಲ್ಯ ವಿಚಾರ ಕುರಿತಾಗಿ ನನಗಿದ್ದ ಬದ್ಧತೆಯನ್ನು ಪ್ರಶ್ನಿಸಿ, ಆ ವಿಚಾರದ ಕುರಿತಾಗಿ ನನ್ನನ್ನು ಇನ್ನಷ್ಟು ತೀಕ್ಷ್ಣ ಚಿಂತನೆಗೆ ದೂಡಿತು. ವ್ಯವಹಾರ ನಿರ್ವಹಣಾ ಶಾಸ್ತ್ರದ ವಿದ್ಯಾರ್ಥಿಯಾಗಿ ಸ್ವಾಭಾವಿಕವಾಗಿ ಎಲ್ಲರಂತೆ ನನ್ನಲ್ಲಿದ್ದ ಭಾವನೆ ಈ ಶೌಚಾಲಯ ನಿರ್ಮಿಸಿಕೊಳ್ಳಲು ಈ ಜನರಿಗೇನು ದಾಡಿ, ಅದರಲ್ಲೂ ಉಚಿತವಾಗಿ ನೀಡಿದರೂ ಏಕೆ ಈ ಜನ ವಿಮುಖರಾಗಿದ್ದಾರೆ ಎಂದು. ಆ ಭಾವನೆಗಳನ್ನು ಕೆಡವಿ ಮುಂದೆ ಧಾರವಾಡದಲ್ಲಿ ಕಾರ್ಯಕ್ರಮ ಯೋಜಿಸುವಾಗ ಬಹುಷಃ ಪ್ರಪ್ರಥಮ ಬಾರಿಗೆ ಮಹಿಳಾ ಸಂಘಗಳಿಗೆ ಶೌಚಾಲಯಕ್ಕಾಗಿ ಪೂರಕ ಸಾಲ ನೀಡುವ ಯೋಜನೆ ರೂಪಿಸುವುದಕ್ಕೂ ಕಾರಣÀವಾಯಿತು. ಅದಿರಲಿ ಆಕೆ ಹೇಳಿದ ಮಾತು “ಪೌಷ್ಠಿಕ ಆಹಾರವಿರಲಿ ಅಣ್ಣ, ಆಹಾರವನ್ನೇ ತೆಗೆದುಕೊಳ್ಳುವುದು ಕಡಿಮೆ ಮಾಡಿದ್ದೇನೆ”É. ಅಷ್ಟರಲ್ಲಿ ಬಗಲಲ್ಲಿ ಕುಳಿತಿದ್ದ ಮಧ್ಯ ವಯಸ್ಸಿನ ಇನ್ನೊಬ್ಬ ಮಹಿಳೆ “ಹೌದು ನಮ್ಮ ಭಾಗದ ಹೆಣ್ಣು ಮಕ್ಕಳು ಹೀಗೆ ಮಾಡುವುದುಂಟು, ಗರ್ಭಿಣಿಯೆಂದು ಸರಿಯಾಗಿ ತಿಂದುಬಿಟ್ಟರೆ ಹೊತ್ತಿಲ್ಲದ ಹೊತ್ತಿನಲ್ಲಿ ಶೌಚಕ್ಕೆ ಹೋಗುವಂತಾದರೆ ಏನು ಮಾಡುವುದು? ತುಂಬಿದ ಬಸುರಿ ಸರಿ ರಾತ್ರಿಯಲ್ಲಿ ಕಿಲೋ ಮೀಟರ್ ದೂರ ನಡೆಯಲು ಸಾಧ್ಯವೇ? ಅದಕ್ಕೇ ತಿನ್ನುವುದನ್ನೆ ಕಡಿಮೆ ಮಾಡಿಬಿಡುತ್ತಾರೆ”. ಅಲ್ಲಿಯ ತನಕ ನನ್ನ ಊಹೆಗೆ ನಿಲುಕದಿದ್ದ ವಿಷಯವದು. ಅಭಿವೃದ್ಧಿಯ ಒಂದು ಸಮಸ್ಯೆ, ಇನ್ನೊಂದಕ್ಕೆ ಹೇಗೆ ತಳುಕು ಹಾಕಿ ಕೊಂಡಿರುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ.

ಈ ವಿಷಯ ಇಲ್ಲಿ ಪ್ರಸ್ತಾಪಿಸಿದ್ದು ಇದು ಬರಿ ಶೌಚದ ವಿಷಯವಲ್ಲೋ ಅಣ್ಣಾ ಎಂದು ಸಾರಿ ಹೇಳಲು. ಈ ವಿಷಯದ ಗಂಭೀರತೆಯ ಅರಿವಿಲ್ಲದೆ ಅಥವಾ ಅರಿವಿದ್ದರೂ ಅμÁ್ಟಗಿ ತಲೆಕೆಡಿಸಿಕೊಳ್ಳದ ಆಡಳಿತ ಶಾಹಿಗಳ ಅಂತಃಕರಣವನ್ನು ಒಂಚೂರಾದರು ಕಲಕಲಿ ಎಂದು. ಸ್ವಚ್ಚ ಭಾರತ ಅಭಯಾನ ಮತ್ತೊಂದು ಕಟ್ಟಡ ನಿರ್ಮಾಣ ಯೋಜನೆಯೆಂದೇ ತಿಳಿಯಬಯಸುವ ಮಂದಿಗೆ ಶೌಚಾ¯ಯದ ಸಮಸ್ಯೆ ಹೇಗೆ ನಾಳೆ ಹುಟ್ಟುವ ಮಗುವಿನ ಅಪೌಷ್ಠಿಕ ಸಮಸ್ಯೆಗೂ ಕಾರಣವಾಗುವುದೆಂಬ ನಿದರ್ಶನನೀq¯ು.

ಇನ್ನು ಮೈಸೂರಿನ ವಿಷಯಕ್ಕೆ ಬರುವುದಾದರೆ, 2018ರ ಮಾರ್ಚ ಮಾಹೆಯೊಳಗೆ ಬಯಲು ಶೌಚಮುಕ್ತ ಜಿಲ್ಲೆಯಾಗುವುದಿ¯್ಲ ಎಂದು ಹೇಳುವುದಕ್ಕೆ ಕಾರಣವಿದೆ. ಮೊದಲಿಗೆ ಜಿಲ್ಲಾ ಪಂಚಾಯಿತಿಯೆ ನೀಡಿದ ಒಂದಷ್ಟು ಅಂಕಿ-ಸಂಖ್ಯೆಗಳನ್ನು ಗಮನಿಸೋಣ. 2015-16ನೆ ಸಾಲಿನಲ್ಲಿ ನಿರ್ಮಿತ ಶೌಚಾಲಯಗಳ ಸಂಖ್ಯೆ 30,641, ಆದರೆ ಗುರಿ ನಿಗದಿಯಾಗಿದ್ದು 63,300. 2016-17ನೇ ಸಾಲಿನಲ್ಲಿ ಸಂಭಾಳಿಸಿದ್ದು 36,442ನಿರ್ಮಾಣ, ಆದರೆ ಗುರಿ ಇದ್ದದ್ದು 55,000. 2017-18 ರಲ್ಲಿ ಎಲ್ಲಾ ಬಾಕಿಯನ್ನು ಸೇರಿಸಿ ಗುರಿ ಹಾಕಿಕೊಂಡಿರುವುದು 1.64 ಲಕ್ಷ ಶೌಚಾಲಯಗಳು. ಮುಂಗಾರಲ್ಲಿ ಮುಂದಾಗಿ ಬೆಳೆ ತೆಗೆಯೋ ಮಗರಾಯ ಎಂದರೆ, ಇರಲಿ ಬಿಡು ಒಟ್ಟಿಗೆ ಸೇರಿಸಿ ಹಿಂಗಾರಲ್ಲೇ ಮಂಟ್ಹಾಕ್ತೀನಿ ಅಂದಂಗಾಯಿತು.

ಅದರೊಟ್ಟಿಗೆ ಅನೇಕ ಆಡಳಿತಾತ್ಮಕ, ಸಾಮಾಜಿಕ ಮತ್ತು ವಾಸ್ತವಿಕ ಸವಾಲು ಜಿಲ್ಲಾ ಪಂಚಾಯ್ತಿvಯ ಮುಂದಿವೆ

 • 2017-18 ನೇ ಸಾಲಿನಲ್ಲಿ ಬೇಡಿಕೆ ಅರಿಯಲು ನಿಖರ ಬೇಸ್ ಲೈನ್ ಸಮೀಕ್ಷೆ ಆಗಿರವುದಿಲ್ಲ.
 • ಹಲವಾರು ಗ್ರಾಮ ಪಂಚಾಯಿತಿಗಳಿಗೆ ಅವರ ಗುರಿಗಳ ಬಗ್ಗೆ ಸ್ವಷ್ಷ ಮಾಹಿತಿ ಇಲ್ಲ.
 • ಧನಗಳ್ಳಿಯಂತಹ ನಿರ್ಮಲ ಗ್ರಾಮ ಪುರಸ್ಕøತ ಹಲವು ಗ್ರಾಮ ಪಂಚಾಯಿತಿಗಳದ್ದು ಇನ್ನೊಂದು ಕಥೆ. ಪ್ರಶಸ್ತಿಗಾಗಿ ಸಾಧಿಸಿದ ಶೌಚಾಲಯಗಳ ಸಂಖ್ಯೆಗಳನ್ನು ಉತ್ಪ್ರೇಕ್ಷಿಸಿ ಈಗ ಅವಶ್ಯಕ ಸಂಖ್ಯೆಗಳನ್ನು ತೋರಿಸುವುದು ಹೇಗೆ ಎಂಬ ಗೊಂದಲದಲ್ಲಿವೆ. ಈ ಗೊಂದಲ ಬಗೆಹರೆಯದೇ ಗುರಿ ನಿಗಧಿಯೇ ಸಾಧ್ಯವಾಗುವುದಿಲ್ಲ.
 • ನಿರ್ಮಲ ಭಾರತ ಅಭಿಯಾನ ಮತ್ತು ರಾಷ್ಷೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಸಮನ್ವಯತೆಯ ಕಾಲದಲ್ಲಿ ಹಲವು ಮಂದಿ ಗುಂಡಿ ತೋಡಿ 4200 ರೂಪಾಯಿಗಳನ್ನು ಬಿಲ್ ಮಾಡಿಸಿಕೊಂಡು ನಂತರ ಮುಂದಿನ ದಿನದಲ್ಲಿ ಶೌಚಾಲಯದ ಅನುದಾನ ಜಾಸ್ತಿ ಸಿಗುವುದೆಂಬ ಮಾಹಿತಿ ಮೇರೆಗೆ ಅವುಗಳನ್ನು ಮುಚ್ಚಿ ಹಾಕಿರುವ ಪ್ರಕರಣಗಳಿವೆ. ಅತಂಹ ಫಲಾನುಭವಿಗಳ ಹೆಸರು ಶೌಚಾಲಯ ರಹಿತರ ಪಟ್ಟಿಯಲ್ಲಿದೆಯೇ? ಅಥವಾ ಸಹಿತರ ಪಟ್ಟಿಯಲ್ಲಿದೆಯೇ? ಸ್ವಷ್ಟವಿಲ್ಲ.
 • ಪಕ್ಷ ರಾಜಕಾರಣದಲ್ಲೆ ಮೀಯುತ್ತಿರುವ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಮತ್ತು ಪರಾಜಿತ ಅಭ್ಯರ್ಥಿಗಳ ಹಿಂಬಾಲಕರ ಗುಂಪುಗಳು ಪ್ರತ್ಯೇಕ ಬಣಗಳಾಗಿಯೇ ನೆಲೆಮಾಡಿವೆ. ಪಂಚಾಯ್ತಿಯ ಅನುದಾನ ಪಡೆಯಲು ಗೆದ್ದವನ ಸಹಕಾರ ಬೇಕು ಆದರೆ ಪ್ರತಿóμÉ್ಠ ಅಡ್ಡ ಬರುವ ಕಾರಣ ಕೇಳುವ ಗೊಡವಗೇ ಹೋಗದೇ ಇರುವ ನಿದರ್ಶನಗಳೂ ಇವೆ.
 • ಇವತ್ತು ಚಿನ್ನವನ್ನೇ ಬೇಕಾದರೂ ತರಬಹುದು. ಆದರೆ ಮರಳು ತರಲು ಸಾಧ್ಯವಾಗದ ಪರಿಸ್ಥಿತಿಯಿದೆ. ಶೌಚಾಲಯ ನಿರ್ಮಾಣಕ್ಕೆ ಇರುವ ತಡೆಗಳಲ್ಲಿ ಇದೂ ಒಂದು.
 • ಇನ್ನು ಸಮುದಾಯದಲ್ಲಿನ ವರ್ತನೆ,ನಂಬಿಕೆ,ಅಭ್ಯಾಸ ಮತ್ತು ಪ್ರಲೋಭನೆಗಳ ವಿಚಾರಕ್ಕೆ ಬರುವುದಾದರೆ ಹಲವು ಮಂದಿ ಶೌಚಾಲಯ ಹೊಂದಿರುವ ಕುಟುಂಬಗಳು ಸರ್ಕಾರದ ಅನುದಾನ ಪಡೆಯುವ ಲೋಭದಿಂದ ಶೌಚಾಲಯ ರಹಿತರೆಂದೇ ಘೋಷಿಸಿ ಕೊಳ್ಳುತ್ತಿರುವುದು ವಿಪರ್ಯಾಸ. ಹಲವು ಕುಂಟುಂಬಗಳಲ್ಲಿ ಶೌಚಾಲಯದ ಅವಶ್ಯಕತೆ ಮತ್ತು ನಿರ್ಮಿಸಿಕೊಳ್ಳಲು ಆಸಕ್ತಿಯಿದ್ದರೂ ಸರ್ಕಾರದ ಅನುದಾನದಿಂದಲೇ ಆಗಲಿ ಎನ್ನುವುದು ನಿರೀಕ್ಷೆಯಿದೆ. ಇನ್ನೂ ಶೌಚಾಲಯಗಳಿರುವ ಮನೆಯಲ್ಲಿ ಅವರ ಉಪಯೋಗ ನೂರು ಪ್ರತಿಶತ ಆಗುತ್ತಿಲ್ಲ. ಕೆಲೆವೆಡೆ ಹಿರಿಯರು ಬಳಸಲಿ ಎಂದೊ ಇನ್ನಲವೆಡೆ ಮಹಿಳೆಯರು ಬಳಸಲಿ ಎಂದೊ ಆಥವಾ ನೀರಿನ ಆಭಾವಕ್ಕೋ ಬಳಸಲಾಗುತ್ತಿಲ್ಲ.

  ಒಟ್ಟಾರೆಯಾಗಿ ಪ್ರಾಥಮಿಕವಾಗಿ ಆಗಬೇಕಿದ್ದ ಸಾಮಾಜಿಕ ಹಾಗೂ ವೈಯಕ್ತಿಕ ವರ್ತನೆಗಳ ಬದಲಾವಣೆ, ಶೌಚಾಲಯ ಹೊಂದಬೇಕೆನ್ನುವ ಬೇಡಿಕೆಯ ನಿರ್ಮಾಣ ಮತ್ತು ಗೃಹ ಶೌಚಾಲಯವಲ್ಲದೆ ಶೌಚಕ್ಕೆ ಹೋಗಲು ಪರ್ಯಾಯವಿಲ್ಲ ಎಂಬ ವಾತಾವರಣ ನಿರ್ಮಾಣ ಅಗದಿರುವುದು ಇಂದಿನ ಪರಿಸ್ಥಿತಿಗೆ ಕಾರಣ.

  ಒಂದೆರಡು ತಿಂಗಳುಗಳ ಹಿಂದೆ ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯನ ಛತ್ರ ಗ್ರಾಮದಲ್ಲಿ ಯುವಕರೊಂದಿಗೆ ಸಮುದಾಯ ಸಮಾಲೋಚನೆ ನೆಡೆಸುತ್ತಿದ್ದೆ. ಹಲವು ವಿಚಾರಗಳ ನಡುವೆ ಶೌಚದ ವಿಚಾರವು ಬಂತು. ಮನೆಯಲ್ಲಿ ಶೌಚಾಲಯ ವಿದ್ದರೂ ಬಯಲು ಬಹಿರ್ದೆಸೆಯೆ ನಮ್ಮ ಅಯ್ಕೆ ಎಂದೂ ಹೇಳುವ ಯುವಕರ ಸಂಖ್ಯೆಯೇ ಅಲ್ಲಿ ಜಾಸ್ತಿಯಿತ್ತು. ಅವರ್ಯಾರು ಬಯಲಿಗೆ ಹೋಗುವುದರಿಂದ ಅಗುವ ಆರೋಗ್ಯ ಸಮಸ್ಯೆಗಳ ಅರಿವಿಲ್ಲದವರಲ್ಲ. ಆದರೆ ಬಯಲಿಗೆ ಹೋದರೆ ಸಂಗಡಿಗರೊಂದಿಗಿನ ಮಾತುಕvಗೆÉ ಸಮಯವಾಗುತ್ತದೆ ಎನ್ನುವ ಕಾರಣ ಅವರದು. ವಿಂಗಡದ ಶೌಚಾಲಯಕ್ಕಿಂತ, ವಿಸ್ತಾರದ ಬಯಲು ಲೇಸು ಎಂದು ಈ ತಲೆಮಾರಿನ ಯುವಕರೆ ಹೊರಟು ಬಿಟ್ಟರೇ ಬಯಲು ಶೌಚ ಮುಕ್ತ ರಾಜ್ಯದ ಕನಸು ನನಸಾಗುವುದುಂಟೇ?.

  ಆಡಳಿತಾತ್ಮಕ ಸಂಕೋಲೆ ಮತ್ತು ಗೊಂದಲಗಳ ನಿವಾರಣೆಯೊಂದಿಗೆ, ಸೂಕ್ತ ಸಾಮಾಜಿಕ ಹಾಗೂ ಸ್ಥಳೀಯ ಸಮಸ್ಯಗಳ ವಿಶ್ಲೇಷಣೆ – ಸಮಾಲೋಚನೆ ಮೂಲಕ ಸಮಸ್ಯೆಗಳ ಮೂಲ ಕಾರಣಗಳÀನ್ನು ಅರಿತು, ಸೂಕ್ಷ್ಮ ಯೋಜನೆಗಳನ್ನು ರಚಿಸಿ ಅದನ್ನು ಉತ್ತರದಾಯಿತ್ವದೊಂದಿಗೆ ಅನುμÁ್ಠನಗೊಳಿಸಿದರೆ ಮಾತ್ರ ಘೋಷಣೆಗಳನ್ನು ಸಾಕಾರಗೊಳಿಸಬಹುದು.

  ಬಸವರಾಜು ಆರ್
  ಕಾರ್ಯಕಾರಿ ನಿರ್ದೇಶಕರು,
  ಗ್ರಾ¸ರೂಟ್ಸ ರಿಸರ್ಚ ಅಂಡ್ ಅಡ್ವೋಕಸಿ ಮೂವ್ಮೆಂಟ್ (ಉಖಂಂಒ), ಮ್ಯೆಸೂರು