ಸುಗಮ್ಯ ಶಿಕ್ಷ ಕಾರ್ಯಕ್ರಮದ ವಿಸ್ತರಣೆ

ಗ್ರಾಮ್ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮ ಸುಗಮ್ಯ ಶಿಕ್ಷ ಕಾರ್ಯಕ್ರಮವಾಗಿದೆ ಈ ಕಾರ್ಯಕ್ರಮವನ್ನು ರಾಜ್ಯದ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ. ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಒಳಪಡುವಂತಹುಗಳಾಗಿವೆ.

ಮಗುವಿನ ಜ್ಞಾನವು ಅನಾವರಣವಾಗುವುದು ಶಿಕ್ಷಣದ ಮೂಲಕ ಇಂತಹ ಶಿಕ್ಷಣ ಸಿಗುವುದು ಶಾಲೆಗಳಲ್ಲಿ ಶಿಕ್ಷಕರ ಮಾರ್ಗದರ್ಶನದಿಂದ ಹಾಗಾಗಿ ಈ ಅಂಶವನ್ನು ಮನಗೊÀಂಡ ಸಂಸ್ಥೆಯು ಸುಗಮ್ಯ ಶಿಕ್ಷ ಕಾರ್ಯಕ್ರಮದ ಮೂಲಕ ಶಾಲೆಗಳಿಗೆ ಪುಟ್ಟ ಹೆಜ್ಜೆಯನ್ನು ಇಡಲು ನಿರ್ಧರಿಸಿತು. ಕಾರ್ಯಕ್ರವನ್ನು ಅನುಷ್ಠಾನಗೊಳಿಸುವ ಮುನ್ನ ಪೂರ್ವ ತಯಾರಿಯನ್ನು ಕೂಡ ಸಂಸ್ಥೆಯು ಆಯೋಜನೆ ಮಾಡಿಕೊಂಡಿತ್ತು, ಇದರ ಮೂಲಕ ಶಾಲೆಯಿರುವ ಸ್ಥಳ, ಸಮುದಾಯದ ಜನರ ಅಭಿಪ್ರಾಯ, ಆ ಸ್ಥಳದ ಪರಿಸರ ಹೀಗೆ ಎಲ್ಲವನ್ನು ಅಧ್ಯಯನವನ್ನು ನಡೆಸಿದ ನಂತರ ಸಿಕ್ಕಂತ ಮಾಹಿತಿಯನ್ನಾಧರಿಸಿ ಸಂಸ್ಥೆಯು ಸುಗಮ್ಯ ಶಿಕ್ಷ ಕಾರ್ಯಕ್ರಮದಲ್ಲಿ ಕೆಲವೊಂದು ಯೋಜನೆಗಳ ರೂಪು-ರೇಷೆಯನ್ನು ತಯಾರಿಸಿತು ಆ ಯೋಜನೆಗಳಿಂದ ಸರ್ಕಾರಿ ಶಾಲೆಯ ಮಕ್ಕಳಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಂಸ್ಥೆಯು ಮುಖ್ಯ ಧ್ಯೇಯೋದ್ಧೇಶವಾಗಿದೆ.

ಯೋಜನೆಗಳ ಅನಾವರಣ ಮಾಡಿದಂತೆ ಮುಖ್ಯವಾಗಿ ನಮಗೆ ಕಾಣಸಿಗುವುದು ಸಂಧ್ಯಾಶಾಲೆ, ಈ ಸಂಧ್ಯಾಶಾಲೆ ಕಲ್ಪನೆಯೇ ಒಂದು ಅದ್ಭುತ. ಸಾಮಾನ್ಯವಾಗಿ ಶಾಲೆ ಬಿಟ್ಟ ನಂತರ ಮನೆಯಲ್ಲಿ ಪೋಷಕರ ಅನುಪಸ್ಥಿತಿಯಲ್ಲಿ ಮಕ್ಕಳು ಹೇಗೆಲ್ಲ ಸಮಯವನ್ನು ಕಳೆಯುತ್ತವೆ, ಸದುಪಯೋಗ ಅಥವಾ ದುರಪಯೋಗ ಪಡಿಸಿಕೊಳ್ಳುತ್ತವೆಯೋ ಎಂಬ ಅನುಮಾನದಿಂದ ಸಮೀಕ್ಷೆಯನ್ನು ನಡೆಸಲಾಗಿ ಇದರಿಂದ ಕೆಲವೊಮ್ಮೆ ದುರುಪಯೋಗವೇ ಹೆಚ್ಚು ಎಂಬುದನ್ನು ಮನಗೊÀಂಡ ಸಂಸ್ಥೆಯು ಇಂತಹ ಮಕ್ಕಳಿಗಾಗಿ ಶಾಲೆ ಬಿಟ್ಟ ನಂತರವು ಚಟುವಟಿಕೆ ಮೂಲಕ ಕಲಿಕೆಯಲ್ಲಿ ಸಕ್ರೀಯವಾಗಲಿ ಎನ್ನುವ ದೃಷ್ಠಿಯಿಂದ ಸಂಧ್ಯಾಶಾಲೆಯನ್ನು ತೆರೆಯಲು ನಿರ್ಧರಿಸಿತು. ನಂತರ ಸ್ಕಿಲ್ ಲ್ಯಾಬ್ ಯೋಜನೆಯ ಮೂಲಕ ಕಂಪ್ಯೂಟರ್ ಶಿಕ್ಷಣ, ಭಾಷಾ ಕೌಶಲ್ಯ, ಜೀವನ ಕೌಶಲ್ಯವನ್ನು ನೀಡುವುದು ಇದರಿಂದ ಮಕ್ಕಳಲ್ಲಿ ಹೊಸ ಲೋಕಕ್ಕೆ ಕರೆದೊಯ್ದು ಅವರ ಪ್ರಗತಿಗೆ ನೆರವಾಗುವುದಾಗಿದೆ. ಶಿಕ್ಷಣ ಪ್ರೋತ್ಸಾಹಕ ಕಾರ್ಯ ಇದರ ಮೂಲಕ ಪ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ನುರಿತ ಶಿಕ್ಷಕರಿಂದ ವಿಷಯವಾರು ತರಭೇತಿಗಳನ್ನು ಕೊಡಿಸುವುದು, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಆಗುವ ಆರ್ಥಿಕ ಹೊರೆ ತಗ್ಗಿಸಲು ವಿದ್ಯಾರ್ಥಿ ವೇತನವನ್ನು ನೀಡುವುದಾಗಿದೆ. ಜಾಕಿ ಫಿಟ್ ಚಿಲ್ಡ್ರನ್‍ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗೆ ಕ್ರೀಡಾ ತರಭೇತಿ ನೀಡುವುದು ಶಾಲೆಗೆ ಅವಶ್ಯಕ ಕ್ರೀಡಾ ಸಾಮಾಗ್ರಿ ನೀಡುವುದಾಗಿದೆ ಒಟ್ಟಾರೆ ಶಾಲೆಯ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ತುಂಬುವುದು. ನನ್ನ ದೇಶ ನನ್ನ ಹಿರಿಮೆಯಿಂದ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದು ಸಂಸ್ಕಾರ ಬೆಳೆಸುವುದು ಆಗಿದೆ ಇದಕ್ಕೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಸಿ ಮಕ್ಕಳಿಗೆ ತಿಳಿಸಿಕೊಡುವುದು ಸೇರಿದೆ. ವಾಷ್-ಇ ಮುಖಾಂತರ ಶಾಲೆಯ ಸ್ವಚ್ಛತೆ,ವೈಯುಕ್ತಿಕ ಸ್ವಚ್ಛತೆ ಕಡೆಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು. ಸಾಂಪ್ರದಾಯಿಕ ಶಕ್ತಿಯ ಮೂಲವನ್ನು ಗುರುತಿಸಿ ಶಾಲೆಗೆ ಅವಶ್ಯಕವಾದುದನ್ನು ಸ್ಥಾಪಿಸಿಕೊಡುವುದು.ಶಾಲಾ ಅಭಿವೃದ್ಧಿ ಯೋಜನೆಯಲ್ಲಿ ಶಾಲಾಭಿವೃದ್ಧಿ, ಸಮುದಾಯದ ಪಾಲ್ಗೊಳ್ಳುವಿಕೆ,ಮಕ್ಕಳ ಪಠ್ಯೇತರ ಚಟುವಟಿಕೆಗಳ ಪ್ರೋತ್ಸಾಹದಾಯಕ ಕಾರ್ಯ ಮಾಡುವುದಾಗಿದೆ.

ಈ ಯೋಜನೆಯನ್ನು ಸಿದ್ಧಗೊಳಿಸಿಕೊಂಡು ಮೊದಲಿಗೆ ಬೆಂಗಳೂರಿನ ಕೂಡ್ಲು, ಬೇಗೂರು, ಕೋಡಿ ಚಿಕ್ಕನಹಳ್ಳಿ ಸರ್ಕಾರಿ ಶಾಲೆಗಳಿಗೆ ಪಾದಾರ್ಪಣೆ ಮಾಡಲಾಯಿತು ಪ್ರಾರಂಭದಲ್ಲಿ ಶಾಲೆಯ ಮಕ್ಕಳಲ್ಲಿ ಶಿಕ್ಷಕರಲ್ಲಿ ಒಂದು ರೀತಿಯ ಕುತೂಹಲ ಸಂಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಈ ಕುತೂಹಲವನ್ನು ಹಾಗೆಯೇ ಉಳಿಸಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ದಿನಗಳು ಉರುಳಿದಂತೆ ಸಂಸ್ಥೆಯ ಕಾರ್ಯಕ್ಕೆ ಅಭಿನಂದನೆ,ಶ್ಲಾಘನೆಯನ್ನು ಮಾಡತೊಡಗಿದರು ಮಕ್ಕಳಲ್ಲಿ ಪ್ರಗತಿಯು ಹಂತ ಹಂತವಾಗಿ ಅಭಿವೃದ್ಧಿಯಾಗುವುದನ್ನು ಸೂಕ್ಷ್ಮವಾಗಿ ಗಮನಿಸಿ ಉತ್ತೇಜಿತವಾದ ಸಂಸ್ಥೆಯು ರಾಜ್ಯದ ಇತರ ಜಿಲ್ಲೆಗಳಾದ ಮೈಸೂರಿನ ಉತ್ತನ ಹಳ್ಳಿ, ಉದ್ಬೂರು ಮತ್ತು ಹಾಸನದ ಹನುಮಂತಪುರ, ದೇವೇಗೌಡ ನಗರದಲ್ಲಿ ಕಾರ್ಯಕ್ರಮವನ್ನು ವಿಸ್ತರಿಸುತ್ತ ಹೋಯಿತು ಇದರ ಫಲವಾಗಿ ಹೆಚ್ಚು ಹೆಚ್ಚು ಮಕ್ಕಳು ಕಾರ್ಯಕ್ರಮದ ಫಲಾನುಭವಿಗಳಾಗ ತೊಡಗಿದರು ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಪೋಷಕರು ಮತ್ತು ಶಿಕ್ಷಕರು, ಗ್ರಾಮ್‍ನ ಸುಗಮ್ಯ ಶಿಕ್ಷ ಕಾರ್ಯಕ್ರಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದರು ಯೋಜನೆಗಳ ವಿವರ ಪಡೆದ ನಂತರ ಅತ್ಯತ್ತಮವೆಂದು ಹೇಳುವುದರ ಜೊತೆಗೆ ಕೆಲವೊಂದು ಇನ್ನೂ ತೀರಾ ಹಿಂದುಳಿದ ಶಾಲೆಗಳ ಹೆಸರು ತಿಳಿಸಿ ಅಲ್ಲಿಯೂ ಕಾರ್ಯಕ್ರಮ ಆಯೋಜಿಸಿ ಎಂದರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆಗೆ..ಸಮುದಾಯ, ಶಿಕ್ಷಕರು,ಪೋಷಕರು ಮತ್ತು ಮಕ್ಕಳು ನೀಡುತ್ತಿರುವ ಸಹಕಾರ ಶ್ಲಾಘನೀಯ.